ದೇಶೀಯ ಭಾಷೆಯಲ್ಲಿ ಸೇವೆ ನೀಡುವ ಕುರಿತ ಸವಾಲುಗಳು: ಹೊಸತಾಗಿ ಲೋಕಲೈಸ್ ಮಾಡುತ್ತಿರುವ ಬ್ರ್ಯಾಂಡ್‌ಗಳಿಗೆ ಒಂದು ಸಲಹೆ

Written by: Ajit Kulkarni

ಭಾಷೆಗಳು ಕೇವಲ ಅಕ್ಷರಗಳಾಗಿದ್ದರೆ, ಇಂಗ್ಲೀಷನ್ನೇ ಚೆನ್ನಾಗಿ ಬಳಸಿಕೊಂಡುಬಹುದಿತ್ತು. ಆದರೆ ದೇಶೀಯ ಭಾಷೆ, ಎಂದರೆ ಮಾತೃ ಭಾಷೆಯಲ್ಲಿ ಮಾತ್ರವೇ ನೀವು ಜೋಕ್‌ಗಳನ್ನು ಮನಸ್ಸಿಗೆ ತಟ್ಟುವಂತೆ ಹೇಳಬಹುದು ಹಾಗೂ ಅಂತರಂಗದ ಭಾವನೆಗಳನ್ನು ಹಂಚಿಕೊಳ್ಳಬಹುದು. ಹೀಗಾಗಿ ಬ್ರ್ಯಾಂಡ್‌ಗಳು ಇತ್ತೀಚಿಗೆ ಹೆಚ್ಚಾಗಿ ತಮ್ಮ ಉದ್ದೇಶಿತ ಗ್ರಾಹಕ ಬಳಗವನ್ನು ತಲುಪಲು ಈ ವಿಧಾನವನ್ನೇ ಬಳಸಲು ಬಯಸುತ್ತಿದ್ದಾರೆ. ಅವರಿಗೆ ಜನರೊಂದಿಗೆ ಸಂವಹನ ಮಾಡುವ ಉದ್ದೇಶ ಮಾತ್ರ ಇರದೇ, ಜನರ ಮನಸ್ಸನ್ನು ತಟ್ಟಲು ಬಯಸುತ್ತಿದ್ದಾರೆ. ಜನರನ್ನು ಸಂತೋಷಪಡಿಸಲು ಎಷ್ಟು ಭಾಷೆಗಳು ಬೇಕಾಗುತ್ತದೆಯೋ ಅಷ್ಟೂ ಭಾಷೆಗಳನ್ನು ಬಳಸಿಕೊಳ್ಳಲು ಸಿದ್ಧರಿದ್ದಾರೆ. 

ಹಲವಾರು ಉದ್ಯಮ ವಲಯಗಳಲ್ಲಿ ಗ್ರಾಹಕರ ತೊಡಗಿಸಿಕೊಳ್ಳುವ ಪ್ರಕ್ರಿಯೆಯನ್ನು ಲೋಕಲೈಸೇಶನ್ ತ್ವರಿತವಾಗಿ ಬದಲಾಯಿಸುತ್ತಿದೆ. ಈಗ ಮಾತುಕತೆಗಳು ಸಮೂಹ ಮಾಧ್ಯಮದ ಮಡಿಲಿನಿಂದ ವೈಯಕ್ತಿಕವಾಗಿ, ಅಂದರೆ ಜನರ ಅಂಗೈಯಲ್ಲಿರುವ ಫೋನ್‌ಗೆ ವರ್ಗಾವಣೆಯಾಗುತ್ತಿವೆ. ಈಗ ಗ್ರಾಹಕರನ್ನು ಇನ್ನಷ್ಟು ಓಲೈಸುವ ಉದ್ದೇಶದಿಂದ, ಅವರಿಗೆ ವೈಯಕ್ತಿಕ ಅನುಭವ ಒದಗಿಸಲು ಒತ್ತು ನೀಡಲಾಗುತ್ತಿದೆ. ಅವರ ಈ ನಡವಳಿಕೆಯನ್ನು ಸಜ್ಜನಿಕೆ ಎನ್ನುವುದಕ್ಕಿಂತ ಇಂದಿನ ಪರಿಸ್ಥಿತಿಗೆ ಅನಿವಾರ್ಯವಾಗಿದೆ ಎಂದು ಹೇಳಬಹುದು. ಈಗಿನ ಸಮಯದಲ್ಲಿ ಪೈಪೋಟಿಯು ಹೆಚ್ಚುತ್ತಿರುವುದರಿಂದ, ಮಾರುಕಟ್ಟೆಯ ಪಾಲು ಕಿರಿದಾಗುತ್ತಿದೆ. ಹೀಗಾಗಿ ಈ ವ್ಯತ್ಯಾಸವು ದೊಡ್ಡ ಸವಾಲನ್ನು ತಂದೊಡ್ಡಿದೆ ಎಂದು ಹೇಳಬಹುದು. ಇಂತಹ ವ್ಯಾಪಾರಿ ಪರಿಸರದಲ್ಲಿ, ಒಂದು ಉತ್ತಮವಾದ ಭಾಷಾ ಕಾರ್ಯತಂತ್ರವು, ಹೊಸ ಹೊಸ ಮಾರುಕಟ್ಟೆಗಳು ತೆರೆಯಲು ಸಹಾಯವಾಗುತ್ತದೆ ಮತ್ತು ಈಗಿರುವ ಮಾರುಕಟ್ಟೆ ವಲಯಗಳಲ್ಲಿ ಭಿನ್ನ ಗುರುತನ್ನು ತಂದು ಕೊಡುತ್ತದೆ. ಆದರೆ ಇದನ್ನು ಹೇಳುವುದು ಸುಲಭ, ಆದರೆ ಕಾರ್ಯರೂಪಕ್ಕೆ ತರುವುದು ಕಷ್ಟ. ಒಂದು ಬ್ರ್ಯಾಂಡ್ ದೇಶೀಯ ಭಾಷೆಗೆ ಒಗ್ಗಿಕೊಳ್ಳುವ ಸಂದರ್ಭದಲ್ಲಿ ಎದುರಾಗುವ ಸವಾಲುಗಳು ಏನು? ಬ್ರ್ಯಾಂಡ್‌ಗಳನ್ನು ಮತ್ತು ಭಾಷೆಗಳನ್ನು ಅರ್ಥ ಮಾಡಿಕೊಳ್ಳುವ ನಮ್ಮ ಅನುಭವದಲ್ಲಿ ಹೇಳುವುದಾದರೆ, ಮುಖ್ಯವಾದ 4 ಸವಾಲುಗಳು ಹೀಗಿವೆ:

1. ನಿರೂಪಣಾ ವೈಫಲ್ಯ

ಲೋಕಲೈಸೇಶನ್ ಒಂದು ಹೊಸ ಬೆಳವಣಿಗೆ ಅಲ್ಲವೇ ಅಲ್ಲ. ಮುಂಚಿನಿಂದಲೂ ಮಾಧ್ಯಮ ಮತ್ತು ಮುದ್ರಣ ಉದ್ಯಮಗಳು ಕಂಟೆಂಟ್ ಅನ್ನು ಬೇರೆಬೇರೆ ಭಾಷೆಗಳಿಗೆ ಯಶಸ್ವಿಯಾಗಿ ಒಗ್ಗಿಸಿಕೊಂಡು ಬಂದಿವೆ. ಆದರೆ ಅವರ ಮೂಲ ಉತ್ಪನ್ನವು ‘ಕಂಟೆಂಟ್’ ಆಗಿರುವುದರಿಂದ, ಭಾಷಾಂತರ ಮತ್ತು ಲೋಕಲೈಸೇಶನ್ ಕುರಿತ ಸವಾಲುಗಳು ಅವರಿಗೂ ಅರ್ಥವಾಗುತ್ತವೆ. ಗ್ರಾಹಕ ಸಂತೃಪ್ತಿಗೆ ಭಾಷಾ ಅನುಭವವು ಮುಖ್ಯವಾಗಿರುತ್ತದೆ, ಆದರೆ ಇದರ ಬಗ್ಗೆ ಮಾಹಿತಿ ಇರದ ಹೆಚ್ಚಿನ ಬ್ರ್ಯಾಂಡ್‌ಗಳು ದೇಶೀಯ ಭಾಷೆಯಯಲ್ಲಿ ಸೇವೆ ಕೊಡಲು ಮುಂದಾಗಿದ್ದರೂ, ಅದನ್ನೇ ಪ್ರಮುಖ ಉತ್ಪನ್ನವಾಗಿ ಮಾಡಿಕೊಂಡಿರುವುದಿಲ್ಲ. ಹೀಗಾಗಿ ಆ ಸಂಸ್ಥೆಗಳ ಅತ್ಯಂತ ನುರಿತ ವ್ಯಕ್ತಿಗಳು ಕೂಡ ತೀರ್ಮಾನ ಕೈಗೊಳ್ಳುವಿಕೆಯಲ್ಲಿ ಹಿನ್ನಡೆ ಅನುಭವಿಸುತ್ತಾರೆ. ಅವರ ದೃಷ್ಟಿಯಲ್ಲಿ, ದೇಶೀಯ ಭಾಷೆ ಆಯ್ಕೆಯನ್ನು ಒದಗಿಸುವುದು, ನಿರೂಪಣೆಯ ಕುರಿತ ಹತೋಟಿಯನ್ನು ಕಳೆದುಕೊಂಡಂತೆ ಎಂದು ತಿಳಿದುಕೊಂಡಿರುತ್ತಾರೆ. ತಮಗೆ ಬೇಕಾದ ರೀತಿಯಲ್ಲಿ ಬ್ರ್ಯಾಂಡ್‌ನ ಮುಖ್ಯ ಸಂದೇಶವನ್ನು ತಮಗೆ ಅಪರಿಚಿತವಾದ ಭಾಷೆಯಲ್ಲಿ ಹೇಳಲಾಗಿದೆ ಎಂಬುದರ ಖಚಿತತೆಯನ್ನು ಪಡೆಯುವುದು ಹೇಗೆ? ಈ ಒಂದು ಭಯವೇ ಅನೇಕ ಸಂಸ್ಥೆಗಳು ತಮ್ಮ ದೊಡ್ಡ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳುವ ಮಾರ್ಗದಿಂದ ಹಿಂದೇಟು ಹಾಕುವಂತೆ ಮಾಡಿಬಿಡುತ್ತದೆ. ಹೀಗಾಗಿ ಯಾರು ತಮ್ಮ ಪರವಾಗಿ ಮಾತನಾಡಲು ಸೂಕ್ತ ವ್ಯಕ್ತಿಗಳನ್ನು ಆಯ್ಕೆ ಮಾಡುತ್ತಾರೋ, ಅವರು ಮಾತ್ರವೇ ಯಶಸ್ಸು ಗಳಿಸುತ್ತಾರೆ. 

2. ಆದ್ಯತೆಗಳ ಕುರಿತು ಗೊಂದಲ ಹುಟ್ಟಿಸುತ್ತಿರುವ ಪ್ರಶ್ನೆಗಳು

ಪ್ರತಿ ಬ್ರ್ಯಾಂಡ್‌ ಗ್ರಾಹಕರಿಗಾಗಿ ಹಲವಾರು ಟಚ್ ಪಾಯಿಂಟ್‌ಗಳನ್ನು ಹೊಂದಿರುತ್ತದೆ. ಬಹುತೇಕ ಸಂದರ್ಭಗಳಲ್ಲಿ, ಬ್ರ್ಯಾಂಡ್‌ಗಳು ಒಮ್ಮೆಲೇ ಸ್ಥಳೀಯತೆಗೆ ಹೋಗಬೇಕೆಂದರೆ, ಸಾಕಷ್ಟು ಸಂಪನ್ಮೂಲ ಮತ್ತು ಚಿಂತನೆಯನ್ನು ಹೊಂದಿರುವುದಿಲ್ಲ. ಹೀಗಾಗಿ ಎಲ್ಲಿಂದ ಆರಂಭಿಸಬೇಕು ಎಂಬುದನ್ನು ಮೊದಲು ತೀರ್ಮಾನಿಸಬೇಕಾಗುತ್ತದೆ. ಈ ಪ್ರಶ್ನೆಗೆ ಉತ್ತರವಾಗಿ, ಒಂದು ಬ್ರ್ಯಾಂಡ್ ಭಾಷಾ ಅನುಭವದ ದೃಷ್ಟಿಯಿಂದ ಪ್ರತಿಯೊಂದು ಟಚ್ ಪಾಯಿಂಟ್‌ ಅನ್ನು ಜಾಗರೂಕತೆಯಿಂದ ಅಧ್ಯಯನ ಮಾಡಬೇಕಾಗುತ್ತದೆ ಹಾಗೂ ಪರಿಣಾಮವು ಎಲ್ಲಿ ಗರಿಷ್ಠವಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಯಾವ ಅನುಭವಗಳು ಕಣ್ಣಾರೆ ಕಂಡುಬರುತ್ತವೆಯೋ, ಅವುಗಳೇ ಹೆಚ್ಚು ಲಾಭದಾಯಕವಾಗಿರುತ್ತವೆ. ಅದು ಒಂದು ಜಾಹೀರಾತು ಆಗಿರಬಹುದು, ವೆಬ್‌ಸೈಟ್‌ನ ಲ್ಯಾಂಡಿಂಗ್ ಪೇಜ್ ಅಥವಾ ಉತ್ಪನ್ನದ ಇಂಟರ್‌ಫೇಸ್ ಆಗಿರಬಹುದು. ಈ ಟಚ್ ಪಾಯಿಂಟ್‌ಗಳು ಗ್ರಾಹಕರನ್ನು ತಕ್ಷಣ ಸೆಳೆದು, ಸಂತೋಷವನ್ನು ನೀಡುತ್ತವೆ ಮತ್ತು ಇನ್ನಷ್ಟು ಅನುಭವವನ್ನು ಬಯಸುವಂತೆ ಮಾಡುತ್ತವೆ. ಒಂದು ಉತ್ತಮವಾದ ಭಾಷಾ ಕಾರ್ಯತಂತ್ರವು ಆದ್ಯತೆಯ ಟಚ್ ಪಾಯಿಂಟ್‌ನಿಂದ ಶುರುವಾಗಿ, ದೇಶೀಯ ಭಾಷೆಗಳಲ್ಲಿ ಆ ಪೂರ್ತಿ ಅನುಭವವನ್ನು ಮರು-ರಚಿಸುವಂತೆ ಮಾಡುತ್ತವೆ. ಅದೇ ತೆರನಾಗಿ, ಪರಿಣಾಮಕಾರಿ ಮಾರುಕಟ್ಟೆ ವಿಭಾಗೀಕರಣವು, ಲೋಕಲೈಸ್ ಮಾಡುವಾಗ ಪ್ರಮುಖ ಭಾಷೆಗಳು ಯಾವವು ಎಂಬುದರ ಕುರಿತು ಸುಳಿವನ್ನೂ ನೀಡುತ್ತದೆ. 

3. ಸೂಕ್ತವಾದ ಪಾಲುದಾರರನ್ನು ಗುರುತಿಸುವುದು

ಎಲ್ಲಾ ಬ್ರ್ಯಾಂಡ್‌ಗಳಿಗೂ ತಮ್ಮಲ್ಲೇ ಭಾಷೆ ಮತ್ತು ಸಂಸ್ಕೃತಿಗೆ ಸಂಬಂಧಪಟ್ಟ ಪರಿಣಿತರನ್ನು ಹೊಂದುವ ಸೌಲಭ್ಯ ಇರುವುದಿಲ್ಲ. ಹೀಗಾಗಿ ದೇಶೀಯ ಭಾಷೆಯ ಕಾರ್ಯತಂತ್ರದ ಯಶಸ್ಸಿಗಾಗಿ ಉತ್ತಮವಾದ ಲೋಕಲೈಸೇಶನ್ ಪಾಲುದಾರರನ್ನು ಹೊಂದುವುದು ಅತೀ ಅವಶ್ಯ. ನಾವು ಪಾಲುದಾರ ಎಂಬ ಪದವನ್ನು ತುಂಬಾ ಜವಾಬ್ದಾರಿಯಿಂದ ಬಳಸುತ್ತಿದ್ದೇವೆ. ಏಕೆಂದರೆ ಈ ದೃಷ್ಟಿಕೊನವೇ ನಮ್ಮನ್ನು ನಮ್ಮ ಗುರಿಯತ್ತ ಕೊಂಡೊಯ್ಯಲು ಸಹಕಾರಿ ಎಂಬುದು ನಮ್ಮ ಅನಿಸಿಕೆ. ಯಾವ ಬ್ರ್ಯಾಂಡ್ ತನ್ನ ಮೂಲ ಧ್ಯೇಯಗಳನ್ನು ಸಾಕಾರಗೊಳಿಸುವ ಸೂಕ್ತ ಏಜನ್ಸಿಯೊಂದಿಗೆ ಪಾಲುದಾರಿಗೆ ಮಾಡಿಕೊಳ್ಳುತ್ತದೆಯೋ, ಅದು ಉತ್ತಮ ಸಾಧನೆಯನ್ನು ತೋರುತ್ತದೆ. ಏಜನ್ಸಿಗೆ ತರಬೇತಿ ನೀಡಿ, ಬ್ರ್ಯಾಂಡ್‌ನ ಅವಶ್ಯಕತೆಗಳಿಗೆ ತಕ್ಕಂತೆ ರೂಪಿಸುವುದು ಸುಲಭವಾಗಿರುತ್ತದೆ. ಎಲ್ಲಿ ಪರಸ್ಪರ ಹೊಣೆಗಾರಿಕೆಯ ಮನೋಭಾವ ಇರುತ್ತದೆಯೋ, ಅಲ್ಲಿ ಮಾತ್ರವೇ ನಂಬಿಕೆ ಮತ್ತು ಯಶಸ್ಸಿನ ಹಂಬಲ ಇರುತ್ತದೆ. ಯಾವ ಸಂಬಂಧವು ಬರೀ ವಹಿವಾಟಿಗೆ ಸೀಮಿತವಾಗಿರುತ್ತದೆಯೋ, ಅದರಿಂದ ಹೆಚ್ಚಿನದನ್ನು ನಿರೀಕ್ಷಿಸಲು ಸಾಧ್ಯವಿಲ್ಲ 

4. ಲೋಕಲೈಸೇಶನ್ ಮತ್ತು ಭಾಷಾಂತರವನ್ನು ಅರ್ಥ ಮಾಡಿಕೊಳ್ಳುವಿಕೆ

ಈ ಮುಂದಿನ ಇಂಗ್ಲಿಶ್ ವಾಕ್ಯವನ್ನು ಗಮನಿಸಿ: There is no set rule that a well-set brand should rule a market like a monopoly. In fact there is a thumb rule that states that any brand that tries to do so will only fall like a set of cards. ಈ ವಾಕ್ಯದಲ್ಲಿ Set ಮತ್ತು Rule ಎಂಬ ಪದಗಳು ಬೇರೆಬೇರೆ ಹಿನ್ನೆಲೆಯಲ್ಲಿ ಕಂಡುಬರುತ್ತವೆ, ಹೀಗಾಗಿ ಪದ ಒಂದೇ ಆದರೂ ಬೇರೆ ಬೇರೆ ಸನ್ನಿವೇಶಗಳಲ್ಲಿ ಬೇರೆ ಬೇರೆ ಅರ್ಥವನ್ನು ನೀಡುತ್ತದೆ. ಹೀಗಾಗಿ ಅನುವಾದಕರು ಈ ವಾಕ್ಯವನ್ನು ಪದಶಃ ಅನುವಾದ ಮಾಡಲು ಹೋದರೆ, ಅದು ಹಾಸ್ಯಾಸ್ಪದವಾಗಬಹುದು. ಅದರ ಜೊತೆಜೊತೆಗೆ, ಲೋಕಲೈಸರ್  ವಾಕ್ಯವನ್ನು ಲೋಕಲೈಸ್ ಮಾಡುವಾಗ, ಅದರ ಸಾರವನ್ನು ಬೇರೊಂದು ಭಾಷೆಗೆ ದಾಟಿಸಬೇಕು. ಪ್ರತಿ ಭಾಷೆಗೆ ಒಂದು ಸೌಂದರ್ಯವಿರುತ್ತದೆ, ಆದರೆ ಅನುವಾದವು ತಪ್ಪಾದಾಗ ಅದು ಹಾಸ್ಯಾಸ್ಪದವಾಗುತ್ತದೆ ಮತ್ತು ಬ್ರ್ಯಾಂಡ್‌ಗೆ ಹಿನ್ನಡೆ ಆಗುತ್ತದೆ. ನಾವು ಈ ಒಂದು ವಿಷಯವನ್ನು ನೆನಪಿಡಬೇಕು, ಏನೆಂದರೆ, ಲೋಕಲೈಸೇಶನ್ ಒಂದು ವಿಷಯದಲ್ಲಿ ಮಷೀನ್ ಮನುಷ್ಯನನ್ನು ಮೀರಲು ಸಾಧ್ಯವಾಗಿಲ್ಲ. ಹೀಗಾಗಿ ಅನುವಾದಕ್ಕಿಂತ, ಪ್ರಾಸಂಗಿಕ ಹಿನ್ನೆಲೆಯ ಆಧಾರದಲ್ಲಿ ಲೋಕಲೈಸ್ ಮಾಡುವಿಕೆಗೆ ಗಮನ ಕೊಡಬೇಕು. 

5. ಗುಣಮಟ್ಟದೊಂದಿಗೆ ದಕ್ಷತೆಯನ್ನು ಕಾಯ್ದುಕೊಳ್ಳುವುದು

ಒಳ್ಳೆಯ ಉದ್ಯಮಗಳು ತಮ್ಮ ದಕ್ಷತೆಯನ್ನು ಕಾಯ್ದುಕೊಳ್ಳಲು ಉಪಾಯಗಳನ್ನು ಕಂಡುಕೊಳ್ಳುತ್ತವೆ. ಪುನರಾವರ್ತನೆಯನ್ನು ಕಡಿಮೆ ಮಾಡುವ, ಏಕರೂಪತೆಯನ್ನು ಕಾಯ್ದುಕೊಳ್ಳುವ, ಪ್ರಕ್ರಿಯೆಗಳನ್ನು ಆಟೋಮೇಟ್ ಮಾಡುವ ಮತ್ತು ಪ್ರಗತಿ ಹೊಂದುವ ಸಾಧ್ಯತೆಗಳು ಯಾವಾಗಲೂ ಇರುತ್ತವೆ. ಲೋಕಲೈಸೇಶನ್ ಉದ್ಯಮವನ್ನು ಕಂಪ್ಯೂಟರ್ ಏಡೆಡ್ ಟ್ರಾನ್ಸ್‌ಲೇಶನ್ (CAT) ಪರಿಕರಗಳು ಈಗ ಹೆಚ್ಚಿನ ಪ್ರಮಾಣದಲ್ಲಿ ಬದಲಾಯಿಸಿವೆ. ಲೋಕಲೈಸೇಶನ್ ಹಿಂದೆ ವಿಜ್ಞಾನವು ಅಡಗಿರುವುದರಿಂದ ಭಾಷೆ ಎಂಬುದು ಕಲೆಯೂ ಆಗಿದೆ ಹಾಗೂ ಅಷ್ಟೇ ಪ್ರಮಾಣದಲ್ಲಿ ವಿಜ್ಞಾನವೂ ಆಗಿದೆ. ಹೀಗಾಗಿ ಇಲ್ಲಿ ಬೆಳವಣಿಗೆಗೆ ಸಾಕಷ್ಟು ಅವಕಾಶವಿರುತ್ತದೆ. ಇದು ಸಂಖ್ಯೆಗಳು ಮತ್ತು ತರ್ಕಕ್ಕೆ ಸಂಬಂಧಪಟ್ಟ ವಲಯವಾಗಿರುವುದರಿಂದ, ಹೊಸತಾಗಿ ಲೋಕಲೈಸ್ ಮಾಡುತ್ತಿರುವ ಬ್ರ್ಯಾಂಡ್‌ಗಳಿಗೆ ಇದು ಅತ್ಯಂತ ಸುಲಭವಾದ ಸವಾಲು ಆಗಿರುತ್ತದೆ. ಹೀಗಾಗಿ ನಿಮ್ಮ ಲೋಕಲೈಸೇಶನ್ ಪಾಲುದಾರರು ನಿಮ್ಮ ಅಗತ್ಯಗಳಿಗೆ ತಕ್ಕಂತೆ, ತಾಂತ್ರಿಕವಾಗಿ ಸಬಲಗೊಳಿಸಿದ ಪರಿಹಾರಗಳನ್ನು ರಚಿಸಲು ಮತ್ತು ಅನ್ವಯಿಸಲು ಸಾಕಷ್ಟು ಸೌಲಭ್ಯವನ್ನು ಹೊಂದಿದ್ದಾರೆ ಎಂದು ಖಚಿತಪಡಿಸಿಕೊಳ್ಳಿ. 

ಈ ಎಲ್ಲಾ ಸಂಗತಿಗಳನ್ನು ಪರಿಶೀಲಿಸಿದ ಬಳಿಕ, ದೇಶೀಯ ಭಾಷೆಗಳ ಆಯ್ಕೆಯನ್ನು ಹೊಂದುವುದು ವ್ಯಾಪಾರದ ದೃಷ್ಟಿಯಿಂದ ಸೂಕ್ತ ತೀರ್ಮಾನ ಎಂದೆನಿದುತ್ತದೆ. ಆದ್ದರಿಂದ ನಿಮ್ಮ ಬ್ರ್ಯಾಂಡ್ ಸೂಕ್ತವಾದ ಪಾಲುದಾರರು ಮತ್ತು ಸೂಕ್ತವಾದ ಮನೋಧರ್ಮದೊಂದಿಗೆ ಮುನ್ನಡೆಯುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

    Leave a Reply

    Your email address will not be published.